ಕನ್ನಡ

ನಾನು ಯುನಿವರ್ಸಿಟಿ  ಆಫ್ ರೋಚೆಸ್ಟರ್ ನ ರಾಜಕೀಯ ಶಾಸ್ತ್ರ (ರಾಜ್ಯ ಶಾಸ್ತ್ರ) ವಿಭಾಗದಲ್ಲಿ ಪಿಹೆಚ್.ಡಿ ಅಧ್ಯಯನ ನಡೆಸುತ್ತಿದ್ದೇನೆ. ನನ್ನ ಕೆಲಸದಲ್ಲಿ  ನಾನು ಗಣಿತ ಹಾಗು ಸಂಖ್ಯಾಶಾಸ್ತ್ರವನ್ನು  ಬಳಸಿ  ಭಾರತೀಯ ನ್ಯಾಯಾಂಗ, ರಾಜಕೀಯದಲ್ಲಿ ಸ್ತ್ರೀಯರ ಪಾಲ್ಗೊಳ್ಳುವಿಕೆ, ಭಾರತೀಯ ಅಧಿಕಾರಿವರ್ಗ, ಹಾಗೂ  ರಾಜಕೀಯ ಸಂಸ್ಥೆಗಳ (political institutions) ಬಗ್ಗೆ ಸಂಶೋಧನೆ ನಡೆಸಲು ಪ್ರಯತ್ನಿಸುತ್ತಿದ್ದೇನೆ . ಶೀಘ್ರದಲ್ಲೇ ನನ್ನ ಸಂಶೋಧನ ಗ್ರಂಥಗಳ ಬಗ್ಗೆ  ಹೆಚ್ಚು ವಿವರ ನೀಡಲು ಯತ್ನಿಸುತ್ತೇನೆ.